+91 96111 01070: ಕೆ ಪಿ ಟಿ ಸಿ ಎಲ್ ಪರೀಕ್ಷಾ ಅಕ್ರಮ: ಪ್ರಮುಖ ಆರೋಪಿ ಪಾಟೀಲ್ ಬಂಧನ
ಬೆಳಗಾವಿ:
ಕೆ ಪಿ ಟಿ ಸಿ ಎಲ್ ಪರೀಕ್ಷಾ ಅಕ್ರಮದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಗೋಕಾಕ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಕೋಳಿಗುಡ್ಡದ ಸೋಮನ ಗೌಡ ಪಾಟೀಲ್ ಎಂದು ಗುರುತಿಸಲಾಗಿದೆ. ಇದರೊಂದಿಗೆ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾದವರ ಸಂಖ್ಯೆ 35ಕ್ಕೆ ಏರಿದೆ.
ಗದಗ ಜಿಲ್ಲೆಯ ಪರೀಕ್ಷಾ ಕೇಂದ್ರದಿಂದ ಆರೋಪಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ಅಭ್ಯರ್ಥಿಗಳಿಗೆ ಕಳುಹಿಸಿದ್ದ ಎಂದು ಆರೋಪಿಸಲಾಗಿದೆ. ಕಳೆದ ಹಲವು ತಿಂಗಳಿನಂದ ಸೋಮನ ಗೌಡ ಪಾಟೀಲ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು.
ಇದೀಗ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾದವರ ಸಂಖ್ಯೆ 35ಕ್ಕೆ ಏರಿದೆ
ಹೊಸ ವರ್ಷಾಚರಣೆ ಸಂಭ್ರಮ :ಡ್ರಗ್ಸ್ ಪೂರೈಕೆಗೆ ಕಡಿವಾಣ
ಬೆಂಗಳೂರು:
ಕೊರೋನಾ ಆತಂಕ ಮುಗಿದಿರುವ ಹಿನ್ನೆಲೆಯಲ್ಲಿ ಈ ಬಾರಿ ರಾಜಧಾನಿ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಯನ್ನು ಅದ್ದೂರಿಯಾಗಿ ಆಚರಿಸಲು ಸಿದ್ದತೆ ಆರಂಭವಾಗಿದೆ. ಇದರ ಜತೆಗೆ ಡ್ರಗ್ಸ್ ಪೆಡ್ಲರ್ ಗಳು ಕೂಡ ಸಕ್ರಿಯರಾಗಿದ್ದಾರೆ.
ಇದನ್ನು ಮನಗಂಡಿರುವ ಸಿಸಿಬಿ ಅಧಿಕಾರಿಗಳು, ಡ್ರಗ್ಸ್ ಜಾಲ ಮಟ್ಟ ಹಾಕಲು ವಿಶೇಷ ಕಾರ್ಯತಂತ್ರ ಹೆಣೆದಿದ್ದಾರೆ. ಡ್ರಗ್ಸ್ ಪೆಡ್ಲರ್ ಗಳ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣು ಇರಿಸಿದ್ದಾರೆ.
ಮಾದಕ ದ್ರವ್ಯ ಚಟುವಟಿಕೆಗಳನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಲಾಗುವುದು ಎಂದು ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ಸ್ಪಷ್ಟಪಡಿಸಿದ್ದಾರೆ.
3 ವರ್ಷದ ಪದವಿ ಕೋರ್ಸ್ ತಕ್ಷಣಕ್ಕೆ ಸ್ಥಗಿತವಿಲ್ಲ
ನವದೆಹಲಿ:
ನಾಲ್ಕು ವರ್ಷಗಳ ಪದವಿ ಕೋರ್ಸ್‌ಗಳನ್ನು ಸಂಪೂರ್ಣವಾಗಿ ಜಾರಿಗೊಳಿಸುವವರೆಗೆ ಮೂರು ವರ್ಷದ ಪದವಿ ಕೋರ್ಸ್‌ಗಳನ್ನು ಸ್ಥಗಿತಗೊಳಿಸುವುದಿಲ್ಲ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಅಧ್ಯಕ್ಷ ಎಂ.ಜಗದೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ವಿಶ್ವವಿದ್ಯಾಲಯಗಳಿಗೆ ಮೂರು ಅಥವಾ ನಾಲ್ಕು ವರ್ಷದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಇರುತ್ತದೆ. ನಾಲ್ಕು ವರ್ಷದ ಕೋರ್ಸ್‌ಗೆ ಸಂಬಂಧಿಸಿದಂತೆ ಹೊಸ ಪಠ್ಯಕ್ರಮದ ಚೌಕಟ್ಟನ್ನು ಸೋಮವಾರ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.
ನಾಲ್ಕು ವರ್ಷಗಳ ಪದವಿಗಳನ್ನು ಹೊಂದಿರುವ ಅಭ್ಯರ್ಥಿಗಳು ನೇರವಾಗಿ ಪಿಎಚ್‌ಡಿ ಅನ್ನು ಮುಂದುವರಿಸಬಹುದು ಮತ್ತು ಅವರಿಗೆ ಸ್ನಾತಕೋತ್ತರ ಪದವಿಯ ಅಗತ್ಯವಿರುವುದಿಲ್ಲ ಎಂದು ಹೇಳಿದ್ದಾರೆ.
ಚಿನ್ನಾಭರಣ ಪ್ರಿಯರೇ ನಿಮಗೊಂದು ಶಾಕಿಂಗ್ ನ್ಯೂಸ್ | ಇಂದು ಚಿನ್ನ, ಬೆಳ್ಳಿಯ ಬೆಲೆಯಲ್ಲಿ ಭರ್ಜರಿ ಏರಿಕೆ!!!
ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಏರಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.
ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.
ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ -ರೂ.5035
8 ಗ್ರಾಂ – ರೂ. 40,280
10 ಗ್ರಾಂ – ರೂ.50,350
100 ಗ್ರಾಂ – ರೂ. 5,03,500
ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ – ರೂ.5,493
8 ಗ್ರಾಂ- ರೂ.43,944
10 ಗ್ರಾಂ- ರೂ.54,930
100 ಗ್ರಾಂ -ರೂ. 5,49,300
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :
ಚೆನ್ನೈ : ರೂ.51,000 ( 22 ಕ್ಯಾರೆಟ್) ರೂ.55,540( 24 ಕ್ಯಾರೆಟ್)
ಮುಂಬೈ : ರೂ.50,300 ( 22 ಕ್ಯಾರೆಟ್) ರೂ.54,880
( 24 ಕ್ಯಾರೆಟ್)
ದೆಹಲಿ : ರೂ.50,450 ( 22 ಕ್ಯಾರೆಟ್) ರೂ.55,040
( 24 ಕ್ಯಾರೆಟ್)
ಕೊಲ್ಕತ್ತಾ : ರೂ.50,300 ( 22 ಕ್ಯಾರೆಟ್) ರೂ.54,880( 24 ಕ್ಯಾರೆಟ್)
ಬೆಂಗಳೂರು : ರೂ.50,350( 22 ಕ್ಯಾರೆಟ್) ರೂ.54,930( 24 ಕ್ಯಾರೆಟ್)
ಹೈದರಾಬಾದ್ : ರೂ.50,300 ( 22 ಕ್ಯಾರೆಟ್) ರೂ.54,880( 24 ಕ್ಯಾರೆಟ್)
ಕೇರಳ : ರೂ.50,300 ( 22 ಕ್ಯಾರೆಟ್) ರೂ.54,880( 24 ಕ್ಯಾರೆಟ್)
ಮಂಗಳೂರು : ರೂ.50,350( 22 ಕ್ಯಾರೆಟ್) ರೂ.54,930( 24 ಕ್ಯಾರೆಟ್)
ಮೈಸೂರು : ರೂ.50,350( 22 ಕ್ಯಾರೆಟ್) ರೂ.54,930( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.50,300 ( 22 ಕ್ಯಾರೆಟ್) ರೂ.54,880( 24 ಕ್ಯಾರೆಟ್)
ಇಂದಿನ ಬೆಳ್ಳಿಯ ದರ:
1 ಗ್ರಾಂ : ರೂ.74
8 ಗ್ರಾಂ : ರೂ.592
10 ಗ್ರಾಂ : ರೂ.740
100 ಗ್ರಾಂ : ರೂ.7,400
1 ಕೆಜಿ : ರೂ.74,000
ಇಂದಿನ ಬೆಳ್ಳಿಯ ದರ:
ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 74,000 ರೂ, ಮೈಸೂರು- 74,000 ರೂ., ಮಂಗಳೂರು- 74,000 ರೂ., ಮುಂಬೈ- 71,000 ರೂ, ಚೆನ್ನೈ- 74,000 ರೂ ದೆಹಲಿ- 71,000 ರೂ, ಹೈದರಾಬಾದ್- 74,000 ರೂ, ಕೊಲ್ಕತ್ತಾ- 71,000 ರೂ. ಆಗಿದೆ.
ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಕೆಲವು ಕಡೆ ಏರಿಕೆ ಕಂಡುಬಂದಿದೆ.
ಉದ್ಯೋಗಾಂಕ್ಷಿಗಳಿಗೆ ಸಿಹಿಸುದ್ದಿ : ಡಿ.16, 20 ರಂದು ಕೊಡಗಿನಲ್ಲಿ ಉದ್ಯೋಗ ಮೇಳ ಆಯೋಜನೆ
ಕೊಡಗು :
ಕೊಡಗು ಜಿಲ್ಲೆಯಲ್ಲಿ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದ್ದು, ಆಸಕ್ತರು ಭಾಗವಹಿಸಬಹುದಾಗಿದೆ. ಡಿ.16 ಮತ್ತು 20ರಂದು ಉದ್ಯೋಗ ಮೇಳ ನಡೆಯಲಿದೆ.
ಡಿಸೆಂಬರ್ 16, ಮಡಿಕೇರಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ಡಿಸೆಂಬರ್ 20, ಗೋಣಿಕೊಪ್ಪಲು ಕಾವೇರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಮೇಳ ನಡೆಯಲಿದೆ.
ಆಸಕ್ತ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದ್ದು, ಉದ್ಯೋಗ ಮೇಳ ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯ ತನಕ ನಡೆಯಲಿದೆ. ಉದ್ಯೋಗ ಮೇಳದಲ್ಲಿ ಎಸ್‌ಎಸ್‌ಎಲ್ಸಿ, ಐಟಿಐ, ಡಿಪ್ಲೊಮಾ, ಯಾವುದೇ ಪದವಿ, ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಪಾಲ್ಗೊಳ್ಳಬಹುದಾಗಿದ್ದು, ನೊಂದಣಿ ಮಾಡಿಕೊಳ್ಳದ ಅಭ್ಯರ್ಥಿಗಳು ಕೂಡ ನೇರವಾಗಿ ಸಂದರ್ಶನದಲ್ಲಿ ಭಾಗಿಯಾಗಬಹುದಾಗಿದೆ. ವಿವಿಧ ಪ್ರತಿಷ್ಟಿತ ಕಂಪನಿಗಳು ಉದ್ಯೋಗ ಮೇಳಕ್ಕೆ ಬರಲಿದ್ದು, ನಿರುದ್ಯೋಗಿ ಯುವಕ-ಯುವತಿಯರು ಈ ಅವಕಾಶ ಬಳಸಿಕೊಳ್ಳಬಹುದಾಗಿದೆ.